
ರೇಕಿ
ರೇಕಿ ಇದು ಜಪಾನಿ ಭಾಷೆಯ ಶಬ್ದ. ಇದರ ಜಪಾನಿ ಸಂಕೇತ ಮತ್ತು ಅರ್ಥವನ್ನು ಈಗಾಗಲೇ ವಿವರಿಸಲಾಗಿದೆ.
ರೇಕಿ ಇದು ಭಾರತೀಯರಿಗೆ ಹೊಸದೇನಲ್ಲ. ಈ ಶಕ್ತಿಯನ್ನು ನಮ್ಮ ಪೂರ್ವಜರು ಮಹಾಶಾಬರಿಶಕ್ತಿ ಎಂದು ಕರೆಯುತ್ತಿದ್ದರು. ಇದು ಭಗವಾನ ಬುದ್ಧ, ಶಿರಡಿ ಸಾಯಿಬಾಬಾ ಇತ್ಯಾದಿ ಮಹಾಪುರುಷರಿಂದ ನಮಗೆ ಪರಿಚಿತವಿದ್ದರೂ ಅದನ್ನು ನಾವು ಗುರುತಿಸಲಿಲ್ಲ. ಆ ಮಹಾಪುರುಷರು ಈ ಶಕ್ತಿಯಿಂದಲೇ ಅನೇಕ ಪವಾಡಗಳನ್ನು ಮಾಡಿದ್ದು.
ರೇಕಿ ಇದು ಎಲ್ಲರೂ ಹುಟ್ಟುವಾಗಲೇ ಅವರವರ ಜೊತೆ ಪಡೆದು ತಂದ ವರದಾನ. ಈ ಶಕ್ತಿ ಸದಾ ನಮ್ಮಲ್ಲಿ ಹರಿಯುತ್ತಲೇ ಇರುವದರಿಂದ ನಮ್ಮನ್ನೊಳಗೊಂಡು ಎಲ್ಲಾ ಜೀವಿಗಳು ಜೀವಂತವಾಗಿರುತ್ತವೆ. ಈ ಅರಿವನ್ನು ಬಲಪಡಿಸಲು ರೇಕಿ ಶಿಕ್ಷಕ, ಗುರುವಿನ ಅಗತ್ಯ ಅನಿವಾರ್ಯವಾಗಿದೆ ಹಾಗೂ ಇದು ರೇಕಿಯ ವೈಶಿಷ್ಟ್ಯತೆ. ರೇಕಿ ದೀಕ್ಷೆ ಪಡೆದ ನಂತರ ವ್ಯಕ್ತಿ ತನ್ನ ಹಾಗೂ ಇತರರ ಮೇಲೆ ಪ್ರಯೋಗಿಸಿ ಅವರ ರೋಗ ಅಥವಾ ತೊಂದರೆಗಳನ್ನು ದೂರ ಮಾಡಬಹುದು.
ರೇಕಿಯ ಅಗತ್ಯ
ಹೊಸಮನೆಯನ್ನು ಕಟ್ಟಲು
ಹೊಸವಾಹನ ಖರೀದಿಸಲು
ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲು
ಇಷ್ಟಾರ್ಥ ಸಿದ್ಧಿಗಾಗಿ
ಆಫೀಸಿನಲ್ಲಿ
ಸಂದರ್ಶನಕ್ಕೆ
ಮದುವೆಯಾಗ ಬಯಸುವವರಿಗೆ
ಸಂತಾನ ಪ್ರಾಪ್ತಿಗಾಗಿ
ಗರ್ಭಿಣಿಯರಿಗೆ
ವಾಸ್ತು ದೋಷ ನಿವಾರಣೆಗೆ
ಗ್ರಹ ದೋಷ ನಿವಾರಣೆಗೆ
ವಿದ್ಯಾರ್ಥಿಗಳಿಗೆ
ಅಡುಗೆ ಮನೆಯಲ್ಲಿ
ಖಾದ್ಯ ಪದಾರ್ಥಗಳಿಗೆ
ದುಶ್ಚಟಗಳಿಂದ ಮುಕ್ಕತಿ ಹೊಂದಲು
ತೂಕ ಇಳಿಸಿಕೊಳ್ಳಲು
ತೂಕ ಹೆಚ್ಚಿಸಿಕೊಳ್ಳಲು
ಸಾಕು ಪ್ರಾಣಿಗಳಿಗೆ
ಗಿಡಮರಗಳಿಗೆ
ಗುರುಗಳು ಮತ್ತು ದೇವತೆಗಳಿಗೆ
ರಕ್ಷಕರಿಗೆ ಮತ್ತು ಆಧ್ಯಾತ್ಮಿಕ ಸಹಾಯಕರಿಗೆ
ಹಿಂದಿನ ಜನ್ಮಗಳಿಗೆ
ಭೂತಕಾಲಕ್ಕೆ
ಭವಿಷ್ಯತ್ ಕಾಲಕ್ಕೆ
ಕಳೆದು ಹೋದ ವಸ್ತುಗಳಿಗೆ
ತೀವ್ರ ನಿಗಾಘಟಕದಲ್ಲಿರುವವರಿಗೆ
ಮೃತ್ಯುಶಯೈಯಲ್ಲಿರುವವರಿಗೆ
ಪೂರ್ವಿಕರಿಗೆ ಮತ್ತು ಪಿತೃಗಳಿಗೆ
ಕೊಟ್ಟಸಾಲ ಮರಳಿ ಪಡೆಯಲು
ಆಧ್ಯಾತ್ಮಿಕ ಉನ್ನತಿ ಹೊಂದಲು
ದೆವ್ವ-ಭೂತ ಇತ್ಯಾದಿ ಅತೃಪ್ತ ಆತ್ಮಗಳಿಗೆ
ಮಾಟ-ಮಂತ್ರ ಇತ್ಯಾದಿ ನಕಾರಾತ್ಮಕ ತೊಂದರೆಗಳಿಗೆ
ಆತ್ಮ ರಕ್ಷಣೆಗಾಗಿ
ಆಕರ್ಷಣಾ ಶಕ್ತಿಗಾಗಿ
ಪರಿಪೂರ್ಣ ಆರೋಗ್ಯ ಯಾರಿಗೆ ತಾನೆ ಬೇಡ? ಪರಿಪೂರ್ಣ ಆರೋಗ್ಯ ಎಂದರೆ? ಸದೃಡವಾಗಿ ದೈಹಿಕವಾಗಿ ಆರೋಗ್ಯದಿಂದ ಇರುವುದು ಎಂಬುದು ಎಲ್ಲರ ನಂಬಿಕೆ. ಈ ಸದೃಡ ಆರೋಗ್ಯದ ಜೊತೆಗೆ ಮಾನಸಿಕ ಸ್ಥಿತಿ ಚೆನ್ನಾಗಿದ್ದರೆ ಮಾತ್ರ ಆತನ ಆರೋಗ್ಯ ಹೆಚ್ಚು ಸದೃಡ. ಹಾಗಾದರೆ ಮಾನಸಿಕ ಆರೋಗ್ಯ ಎಂದರೆ- + ve ಖಿhiಟಿಞiಟಿg, + ve ಛಿhಚಿಡಿಚಿಛಿಣeಡಿ, ಚಿbosoಡಿಠಿಣioಟಿ ಠಿoತಿeಡಿ, ಛಿoಟಿಛಿeಟಿಣಡಿಚಿಣioಟಿ, ನೆನಪಿನ ಶಕ್ತಿ, ಆಂತರಿಕ ಶಾಂತಿ ಈ ಎಲ್ಲವೂ ಸರಿಯಾಗಿದ್ದಾಗ ವ್ಯಕ್ತಿಯ ಜೀವನ ಪರಿಪೂರ್ಣ ಆರೋಗ್ಯದಿಂದ ಕೂಡಿರುತ್ತದೆ.
ಈ ಪರಿಪೂರ್ಣ ಆರೋಗ್ಯ ಪಡೆಯಲು ರೇಕಿ ನಮಗೆ ಸಹಾಯ ಮಾಡುತ್ತದೆ. ರೇಕಿ ಸಾಧನೆ ಮಾಡುವ ವ್ಯಕ್ತಿಯಲ್ಲಿ ಅನೇಕ ಬದಲಾವಣೆಗಳು ಕಂಡು ಬರುತ್ತವೆ. ಅವನ ಆರೋಗ್ಯ, ನಡತೆ, ವಿಚಾರ, ಮಾನಸಿಕ ಸ್ಥಿತಿ, ಆರ್ಥಿಕ ಸ್ಥಿತಿ ಇತ್ಯಾದಿಗಳಲ್ಲಿ ಉತ್ತಮ ಪ್ರಗತಿಗಳು ಕಂಡು ಬರುವವು. ಚಂಚಲತೆ ಕಡಿಮೆ ಆಗುವುದು. ಉತ್ತಮ ಹವ್ಯಾಸಗಳು ಮೈಗೂಡಿಗೊಳ್ಳುವವು. ಕೆಟ್ಟ ಜನ, ಕೆಟ್ಟ ಹವ್ಯಾಸ ಕೆಟ್ಟ ವಾತಾವರಣದಿಂದ ಸಂಪರ್ಕ ತನ್ನಿಂದ ತಾನೆ ಕಡಿದು ಹೋಗುವುದು.
ಡಾ|| ಮಿಕಾವೋ ಉಸೋಯಿ (15 ಅಗಷ್ಟ 1865-9 ಮಾರ್ಚ 1926)
ಈ ಮೊದಲು ಹೇಳಿರುವಂತೆ ರೇಕಿಯ ಮೂಲ ಭಾರತ ಇದನ್ನು ಕ್ರಿಪೂ 500-600 ರಲ್ಲಿ ಗೌತಮ ಬುದ್ಧ ಬಳಸಿದ್ದು ನಮಗೆಲ್ಲ ತಿಳಿದಿದೆ. ಅನಂತರ ಏಸು, ಸಾಯಿಬಾಬಾ ಹೀಗೆ ಮಹಾಪುರುಷರೆಲ್ಲರೂ ಬಳಸಿದ್ದಾರೆ. ಆದರೆ ಇದನ್ನು ಅವರು ತಮ್ಮ ಶಿಷ್ಯ ಪರಂಪರೆಯನ್ನು ಹೊರತುಪಡಿಸಿ ಯಾರಿಗೂ ಹೇಳಿಕೊಡದ ಕಾರಣ ಈ ಶಕ್ತಿಯ ಸಾಧಕರ ಸಂಖ್ಯೆ ತುಂಬಾ ಕಡಿಮೆ ಇತ್ತು. ಅನಂತರ ಕೇವಲ ಬೌದ್ಧ ಸನ್ಯಾಸಿಗಳು ಮಾತ್ರ ಇದನ್ನು ಅಭ್ಯಸಿಸುತ್ತಾ ಬಂದರೂ ಹೊರಗಿನ ಜನರಿಗೆ ತಿಳಿಯಗೊಡಲಿಲ್ಲ. ಇದನ್ನು ಹೊರಜಗತ್ತಿಗೆ ಪರಚಯಿಸಿ ಅದಕ್ಕೆ ಪುನಶ್ಚೇತನ ನೀಡಿದ ಶ್ರೇಯಸ್ಸು ಡಾ|| ಮಿಕಾವೋ ಉಸೋಯಿ ಅವರಿಗೆ ಸೇರುತ್ತದೆ. ಅದ್ದರಿಂದ ಈ ಶಕ್ತಿ “ಉಸೋಯಿ ರೇಕಿ ಪದ್ದತಿ” ಎಂದು ಪರಿಚಿತ.
ಉಸೋಯಿ ಅವರು ವೃತ್ತಿಯಿಂದ ವೈದ್ಯರಾಗಿದ್ದರು. ಅವರು ಒಂದು ಬಾರಿ ಕ್ಲಾಸ್‍ನಲ್ಲಿ “ಯೇಸುಕ್ರಿಸ್ತನು ಕೇವಲ ಹಸ್ತಸ್ಪರ್ಶದಿಂದ ರೋಗಗಳನ್ನು ಗುಣಪಡಿಸುತ್ತಿದ್ದನು ಇದನ್ನು ನೀವೂ ಕೂಡ ಮಾಡಬಹುದು.” ಎಂದು ಹೇಳಿದ್ದಾನೆ ಎಂದಾಗ ಅವರ ಒಬ್ಬ ವಿದ್ಯಾರ್ಥಿ “ಹಾಗಾದರೆ ನೀವು ಸ್ಪರ್ಶದಿಂದ ರೋಗ ವಾಸಿ ಮಾಡುತ್ತೀರಾ?” ಎಂದಾಗ ಈ ಪ್ರಶ್ನೆ ಅವರ ಚಿತ್ತವನ್ನು ಸೆಳೆಯಿತು. ಇದಕ್ಕೋಸ್ಕರ ಎಲ್ಲ ಕ್ರಿಶ್ಚಿಯನ್ ಗ್ರಂಥಗಳನ್ನು ಅಭ್ಯಸಿಸಿದರೂ ಅವರಿಗೆ ಯಾವುದೇ ಮಾಹಿತಿ ತಿಳಿಯಲಿಲ್ಲ. ಅನಂತರ ಅವರು ಬೌದ್ದ ಸನ್ಯಾಸಿಗಳನ್ನು ಸಂದರ್ಶಿಸಿ ರೇಕಿ ಮಾಹಿತಿ ಪಡೆದುಕೊಂಡರು. ಆ ಮಾಹಿತಿಯನ್ನು ಸಾಕಾರಪಡಿಸಿಕೊಳ್ಳಲು ಕುರಮಾ-ಯಾಮಾ ಬೆಟ್ಟದ ಮೇಲೆ 21 ದಿನ ಧ್ಯಾನ ಮಗ್ನರಾದರು ಕೊನೆಗೆ 21ನೇ ದಿನ ಅವರ ಬ್ರಹ್ಮರಂಧ್ರವನ್ನು ಬಿಳಿ ಬೆಳಕು ಪ್ರವೇಶಿಸಿತು. ಈ ಬೆಳಕೆ ಪ್ರಭಾವಶಾಲಿ & ದೈವಿಕ ಶಕ್ತಿಯಾದ ರೇಕಿ.
ಸುಮಾರು ವರ್ಷಗಳವರೆಗೆ ಅವರು ಅನೇಕ ಜನರಿಗೆ ರೋಗಿಗಳಿಗೆ ಉಪಚಾರ ನೀಡಿದರು ಆದರೆ ಅವರಿಂದ ಪ್ರಯೋಜನ ಪಡೆದುಕೊಂಡ ಜನರಲ್ಲಿ ಕೃತಜ್ಞತಾ ಮನೋಭಾವನೆ ಕಂಡುಬರದ ಕಾರಣ ಚಿಕಿತ್ಸೆಯನ್ನು & ದೀಕ್ಷೆಯನ್ನು ಉಚಿತವಾಗಿ ಕೊಡಬಾರದೆಂದು ನಿರ್ಧರಿಸುತ್ತಾರೆ. ಆದ್ದರಿಂದ ರೇಕಿ ಚಿಕಿತ್ಸೆ & ದೀಕ್ಷೆಯನ್ನು ಉಚಿತವಾಗಿ ಕೊಡಲಾಗುವುದಿಲ್ಲ. ಉಸೋಯಿ ಅವರ ನಂತರ ಡಾ|| ಚುಚಿರೊ ಹಯಾಸಿ ಹಾಗೂ ಶ್ರೀಮತಿ ಹವಾಯೋ ಟಕಾಟಾ ಇವರು ಈ ಚಿಕಿತ್ಸಾ ಪದ್ದತಿಯನ್ನು ಭೋದಿಸಿ ಮುಂದುವರೆಸಿಕೊಂಡು ಬಂದರು.












